A Snippet of Shikhandini in Kannada!

Dear Readers,

Hope you’re doing well.

On popular demand, the synopsis of my book Shikhandini was translated to Kannada by a dear friend Anushree who happens to be an avid reader of both Kannada and English novels. She is an amazing storyteller with a beautiful voice. She has her very own podcast where she takes listeners on a tour around the world through her captivating narration of folk stories. You can check it out here – Tales by the Fireside.

Here’s what she wrote about Shikhandini.

ಕುರುಕ್ಷೇತ್ರದ ಮಹಾಯುದ್ಧ ಕಳೆದು ಶತಮಾನಗಳೇ ಸಾಗಿವೆ ಆದರೆ ಅವಳ ಹೆಸರನ್ನು ಈ ದಿನಕ್ಕೂ ಪಿಸುಮಾತುಗಳಲ್ಲಿ ಗುಟ್ಟಾಗಿ ಉಚ್ಚರಿಸಲಾಗುತ್ತದೆ. ನಪುಂಸಕ, ನರನೋ ಅಲ್ಲ- ನಾರಿಯು ಅಲ್ಲ. ಪಾಂಚಾಲದ ರಾಜಕುಮಾರಿ ಶಿಖಂಡಿನಿಯ ಗುರುತು ಕೇವಲ ಇಷ್ಟಕ್ಕೆ ಸೀಮಿತವಾಯಿತೆ?

ರಾಜ ದ್ರುಪದನ ಜೇಷ್ಠ ಪುತ್ರಿ ಶಿಖಂಡಿನಿಗೆ ಬಾಲ್ಯದಿಂದಲೂ ಯೋಧನಾಗಲು ತರಬೇತಿ ನೀಡಲಾಯಿತು. ಮೊದಲಿಗೆ ರಥಿಯಾಗಿ ಅನಂತರ ಅತಿರಥಿಯಾಗಿ ಸಾಟಿ ಇಲ್ಲದ ಶೌರ್ಯ ಕೌಶಲವನ್ನು ಪ್ರದರ್ಶಿಸಿ ರಣರಂಗದಲ್ಲಿ ನೂರಕ್ಕೆ ನೂರು ಕೌರವ ಸಹೋದರರನ್ನು ಒಬ್ಬಂಟಿಯಾಗಿ ಮಣ್ಣುಮುಕ್ಕಿಸಿದ್ದಳು. ಜನ್ಮ ಜನ್ಮಾಂತರದ ಪ್ರತೀಕಾರದ ಜ್ವಾಲೆಯಲ್ಲಿ ಮಿಂದೆದ್ದಅವಳು ಶ್ರಮಿಸಿದ್ದು ಒಂದೇ ಗುರಿಯ ಕಡೆಗೆ, ಹಸ್ತಿನಾಪುರದ ಮಹಾರಥಿಯನ್ನು ಕೊನೆಗಾಣಿಸುವುದು, ಆದರೆ ಇದಷ್ಟೇ ಅವಳ ಅಂತಿಮ ವಿಧಿಯಾಗಿತ್ತೆ?

ಕುರುಕ್ಷೇತ್ರ ಮಹಾಯುದ್ಧದಲ್ಲಿ ಪಾಂಡವರು ಎಲ್ಲಾ ಭರವಸೆಯನ್ನು ಕಳೆದುಕೊಂಡು ಕಳಹೀನರಾಗಿ ಸೋಲನ್ನು ಎದುರು ನೋಡುತ್ತಿರುವಾಗ ಶಿಖಂಡಿನಿಯು ಅವರ ಪರವಾಗಿ ಯುದ್ಧರಂಗಕ್ಕೆ ಕಾಲಿಡುತ್ತಾಳೆ. ಅವಳು ಬಾರದೆ ಹೋಗಿದ್ದರೆ ಇತಿಹಾಸದ ಪುಟಗಳು ಬೇರೆಯ ಕಥೆಯನ್ನೇ ಹೇಳುತ್ತಿತ್ತು. ಆದರೆ ತನ್ನ ಈ ಧ್ಯೇಯವನ್ನು ಸಾಧಿಸಲು ಅವಳು ತೆತ್ತ ಬೆಲೆ ಏನು? ಮಾಡಿದ ತ್ಯಾಗಗಳೇನು? ಕುರು ವಂಶಸ್ಥರ ಆಟದಲ್ಲಿ ಕೇವಲ ಒಂದು ದಾಳವಾಗಿ ಉಳಿದಳ? ಅಥವಾ ಅವಳು ನಿಜವಾದ ನಾಯಕಿಯಾಗಿ ಹೊರಹೊಮ್ಮಿದಳ? ಪುರುಷ ಪ್ರಧಾನ ಜಗತ್ತಿನಲ್ಲಿ ಅವಳ ಸಾಧನೆಯನ್ನು ಮರೆಮಾಚಲಾಯಿತೆ?
ಈ ಕಥೆಯ ಹೊಸ ಯುಗದ ಪುನರಾವರ್ತನೆಯಲ್ಲಿ, ಪ್ರಾಚೀನ ವೈ ದ್ಯಕೀಯ ವಿಜ್ಞಾನದ ಆಧಾರದ ಮೇಲೆ ಶಿಖಂಡಿನಿಯು ಮಹಿಳೆಯಿಂದ ಪುರುಷನಾಗಿ ರೂಪಾಂತರಗೊಳ್ಳುವುದು, ಮಾನವ ಮನಸ್ಸಿನ ತೀವ್ರತೆ, ಚಲನೆಯ ಉದ್ದೇಶ ಮತ್ತು ಅಂತಿಮ ತ್ಯಾಗ ಬಲಿದಾನಗಳನ್ನು ನೈಜವಾಗಿಸುತ್ತದೆ. ಈ ನವಯುಗದಲ್ಲಿ ತೃತಿಯ ಲಿಂಗವನ್ನು ಗುರುತಿಸಿ ಸ್ವೀಕರಿಸುತ್ತಿರುವಾಗ ಶಿಖಂಡಿನಿಯ ದುರಂತ ಕಥೆಯನ್ನು ಮತ್ತೆ ಹೇಳುವ ಸಮಯ ಒದಗಿಬಂದಿದೆ.

ಸಾರಾಂಶ

ಶಿಖಂಡಿನಿ – ಮಹಾಭಾರತದ ಯೋಧ ರಾಜಕುಮಾರಿ ಪುಸ್ತಕವು, ಪ್ರಾಚೀನ ಭಾರತದ ಇಂದಿಗೂ ಪ್ರಸ್ತುತವಾದ ಮಹಾಕಾವ್ಯ ಮಹಾಭಾರತದ ಅಸಾಂಪ್ರದಾಯಿಕವಾದ ಪುನರಾವರ್ತನೆಯಾಗಿದೆ. ಈ ಕಥೆಯು ಪಾಂಚಾಲ ರಾಜಕುಮಾರಿ ಶಿಖಂಡಿನಿಯ ಜೀವನದ ಸುತ್ತ ಸುತ್ತುತ್ತದೆ ಈ ಪುಸ್ತಕದಲ್ಲಿ ಅವಳ ವೀರಾನ್ವೇಷಣೆಗಳು ಅವಳ ಶೌರ್ಯ, ಶಕ್ತಿ ಹಾಗೂ ಕುರುಕ್ಷೇತ್ರ ಮಹಾಯುದ್ಧದಲ್ಲಿ ಅವಳು ಮಾಡಿದ ಅಂತಿಮ ತ್ಯಾಗದ ಬಗ್ಗೆ ವಿಸ್ತರಿಸುತ್ತದೆ.
ಕಥೆಯು ಪಾಂಚಾಲ ರಾಜಧಾನಿಯಾದ ಅಹಿಕ್ಷೇತ್ರದಲ್ಲಿ ಶಿಖಂಡಿನಿಯ ಜನನದೊಂದಿಗೆ ಪ್ರಾರಂಭವಾಗುತ್ತದೆ. ರಾಜ ದ್ರುಪದ ಮತ್ತು ರಾಣಿ ಕೋಕಿಲ ದೇವಿಯ ಜೇಷ್ಠಪುತ್ರಿ ಶಿಖಂಡಿನಿ.
ಕಾಶಿಯ ರಾಜಕುಮಾರಿ ಅಂಬಾ ಪುನರ್ಜನ್ಮವೆತ್ತಿ ಶಿಖಂಡಿನಿಯಾಗಿ ಬಂದಳೆಬ ನಂಬಿಕೆ ಅನೇಕರದ್ದು. ಮತ್ತೊಂದು ಜೀವಿತಾವಧಿಯಲ್ಲಿ ರಾಜಕುಮಾರಿ ಅಂಬಾ ಮಹಾರತಿ ಭೀಷ್ಮನಿಂದ ತನ್ನ ಪ್ರೀತಿಯನ್ನು ಕಳೆದುಕೊಂಡು ಅನ್ಯಾಯವನ್ನು ಅನುಭವಿಸುತ್ತಾಳೆ. ಈ ಸನ್ನಿವೇಶದಿಂದ ಕುಪಿತಳಾದ ಅವಳು ತನ್ನ ಜೀವನದುದ್ದಕ್ಕೂ ಭೀಷ್ಮನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಾಳೆ. ಅದು ಸಾಧ್ಯವಾಗದಿದ್ದಾಗ ಉರಿಯುವ ಚಿತೆಗೆ ಹಾರಿ ಪ್ರಾಣ ಬಿಡುತ್ತಾಳೆ.
ಮತ್ತೊಂದೆಡೆ ಹಸ್ತಿನಾಪುರದ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ದ್ರುಪದನ ತಂದೆ ರಾಜ ಪ್ರಿಶತ, ಕಾಶಿ ರಾಜಕುಮಾರಿ ಅಂಬಾ ತನ್ನ ಪುನರ್ಜನ್ಮಕ್ಕೆ ಪಾಂಚಾಲ ರಾಜ್ಯವನ್ನು ಆರಿಸಿಕೊಂಡಿದ್ದಾಳೆ ಎಂದು ತಿಳಿದು ಸಂತೋಷಪಡುತ್ತಾನೆ. ದುರಹಂಕಾರಿ ಮಹಾರಥಿಯ ಸಾವಿನಿಂದ ಮಾತ್ರ ಹಸ್ತಿನಾಪುರದ ಅವನತಿ ಸಾಧ್ಯ ಎಂದು ಅವನಿಗೆ ತಿಳಿದಿರುತ್ತದೆ. ದುರದೃಷ್ಟಕರವೆಂದರೆ ಆಕೆಯ ಜನನದ ಕೆಲವೇ ನಿಮಿಷಗಳಲ್ಲಿ ಶಿಖಂಡಿನಿಯ ಅಂತಿಮ ವಿಧಿಯನ್ನು ನಿರ್ಧರಿಸಲಾಗುತ್ತದೆ.

ಶಿಖಂಡಿನಿ ತನ್ನ ಅಜ್ಜನ ಶಿಕ್ಷಣದಡಿಯಲ್ಲಿ ಹಲವಾರು ಶಸ್ತ್ರಾಸ್ತ್ರಗಳು ಮತ್ತು ಯುದ್ದಕಲೆಗಳನ್ನು ಕರಗತ ಮಾಡಿಕೊಂಡು ಉತ್ತಮ ಯೋಧನಾಗಿ ಬೆಳೆಯುತ್ತಾಳೆ. ಅವಳು ತನ್ನ ಬಾಲ್ಯದ ಬಹುಪಾಲು ಮತ್ತು ಪ್ರೌಢಾವಸ್ಥೆಯ ಆರಂಭದವರೆಗೂ ಬಹಳ ಕಟ್ಟುನಿಟ್ಟಾದ ಶಿಸ್ತಿನ ಜೀವನ ನಡೆಸುತ್ತಾಳೆ. ಅವಳಿಗೆ ಪದೇ ಪದೇ ತಾನು ಸಾಮಾನ್ಯ ಹುಡುಗಿಯಲ್ಲ ಮಹಾರಥಿಯನ್ನು ಕೊಂದು ಪಾಂಚಾಲದ ಕೀರ್ತಿ ಪತಾಕೆಯನ್ನು ಹಾರಿಸಲು ಬಂದವಳೆಂದು ಮನದಟ್ಟು ಮಾಡಲಾಗುತ್ತದೆ.
16 ವರ್ಷಗಳ ನಂತರ ಶಿಖಂಡಿನಿ ಪಾಂಚಾಲದ ಸೈನ್ಯವನ್ನು ಯುದ್ಧದಲ್ಲಿ ಸೇನಾಧಿಪತಿಯಾಗಿ ಮುನ್ನಡೆಸುತ್ತಾಳೆ. ಕುರು ಸೈನ್ಯದ ವಿರುದ್ಧ ವೀರಳಂತೆ ಹೋರಾಡಿ ಮೊದಲನೆಯ ದಿನದಂದೇ 100 ಕೌರವ ರಾಜಕುಮಾರರನ್ನು ಸೋಲಿಸಿ ಆ ಮೂಲಕ ಅತಿರಥ ಎಂಬ ಬಿರುದನ್ನು ಗಳಿಸುತ್ತಾಳೆ. ಎರಡನೆಯ ದಿನ ಪಾಂಡವ ಸಹೋದರರು ಇಡೀ ಪಾಂಚಾಲ ಸೈನ್ಯವನ್ನು ಸೋಲಿಸುತ್ತಾರೆ. ಈ ಸೋಲಿನ ಭಾರವನ್ನು ಶಿಖಂಡಿನಿಯ ಹೆಗಲಿಗೆ ಹೊರಿಸಲಾಗುತ್ತದೆ.ಸೋಲಿನಿಂದ ಆದ ಅವಮಾನ ಹಾಗೂ ತಂದೆ ದ್ರುಪದನ ಆರೋಪದಿಂದ ನೋವು ಅನುಭವಿಸಿದ ಶಿಖಂಡಿನಿ ಮತ್ತೆಂದೂ ಪಾಂಚಾಲಕ್ಕೆ ಹಿಂತಿರುಗಬಾರದೆಂದು ನಿಶ್ಚಯಿಸುತ್ತಾಳೆ. ಆಗ,ತನ್ನ ಹಿಂದಿನ ಜನ್ಮದಲ್ಲಿದ್ದ ನಿಗೂಢ ವ್ಯಕ್ತಿಯೊಬ್ಬ ಅವಳನ್ನು ಯಕ್ಷರ ಬಳಿ ಹೋಗುವಂತೆ ಮಾರ್ಗದರ್ಶನ ನೀಡುತ್ತಾನೆ. ಯಕ್ಷರ ನಾಯಕ ಸ್ತುನಕರ್ಮ ಶಿಖಂಡಿನಿಯನ್ನು ತನ್ನ ಮನೆಗೆ ಬರಲು ಆಹ್ವಾನಿಸುತ್ತಾನೆ. ಆ ಬುಡಕಟ್ಟು ಜನರು ವಾಸಿಸುವ ಅರಣ್ಯವೇ ಅವಳ ಎರಡನೆಯ ಮನೆಯಾಗುತ್ತದೆ. ಇಲ್ಲಿಂದ ಶಿಖಂಡಿನಿಯ ಜೀವನ ಹೊಸ ತಿರುವನ್ನು ಪಡೆಯುತ್ತದೆ.

ರಾಜಕುಮಾರಿ ದ್ರೌಪದಿ ಹಾಗೂ ಅವಳ ಅವಳಿ ಸಹೋದರನ ಜನನವು ಶಿಖಂಡಿನಿಯನ್ನು ಪಾಂಚಾಲಕ್ಕೆ ಮರಳಿ ಕರೆತರುತ್ತದೆ. ಆ ಹೊತ್ತಲ್ಲೇ, ತನ್ನ ತಾಯಿಯ ಅನಾರೋಗ್ಯದ ಸುದ್ದಿಯು ಬರುತ್ತದೆ. ತಾಯಿಯ ಪ್ರೀತಿ ಹಾಗೂ ಆತ್ಮಾಭಿಮಾನದ ಸಂಘರ್ಷದಲ್ಲಿ ತಾಯಿಯ ಅಗಾಧ ಪ್ರೀತಿ ಗೆಲ್ಲುತ್ತದೆ. ಶಿಖಂಡಿನಿ ಪಾಂಚಾಲದಲ್ಲಿ ಉಳಿಯಲು ನಿರ್ಧರಿಸುತ್ತಾಳೆ. ಇದೆ ಸಮಯದಲ್ಲಿ ದ್ರೌಪದಿಯೊಂದಿಗೆ ಶಿಖಂಡಿನಿಯ ಬಾಂಧವ್ಯ ಬಲಗೊಳ್ಳುತ್ತದೆ.
ತಾಯಿಯ ಅಂತಿಮ ಅಪೇಕ್ಷೆಯಂತೆ ರಾಜಕುಮಾರಿ ದ್ರೌಪದಿ ಪಾಂಡವರನ್ನು ವಿವಾಹವಾದ ಕೂಡಲೇ ಶಿಖಂಡಿನಿಯ ಸ್ವಯಂವರವನ್ನು ಏರ್ಪಡಿಸಲಾಗುತ್ತದೆ. ಶಿಖಂಡಿನಿಯಾರನ್ನು ವರನಾಗಿ ಸ್ವೀಕರಿಸುತ್ತಾಳೆ ಎಂಬ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ. ಮದುವೆಯ ಅನಂತರದಲ್ಲಿ ಅವಳು ತನ್ನ ಹಿಂದಿನ ಜೀವನದ ಕಹಿ ಘಟನೆಗಳನ್ನು ಮರೆತು ಹೊಸ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾಳೆ.

ಆದರೆ ವಿಧಿ ಮತ್ತೊಮ್ಮೆ ಅವಳ ಜೀವನದಲ್ಲಿ ಆಟವಾಡಲು ಪ್ರಾರಂಭಿಸುತ್ತದೆ. ಶಿಖಂಡಿನಿಯ ಪೂರ್ವ ಜನ್ಮದ ಭವಿಷ್ಯವಾಣಿ ಅವಳ ಹೊಸ ಜೀವನಕ್ಕೂ ಪ್ರವೇಶಿಸುತ್ತದೆ. ಇದೆಲ್ಲದರ ಜೊತೆಗೆ ರಾಜ್ಯಕ್ಕೆ ಉತ್ತರಾಧಿಕಾರಿಯನ್ನು ಕೊಡುವಲ್ಲಿ ವಿಫಲವಾಗುತ್ತಾಳೆ. ಇದರಿಂದ ಹೊಸ ಕುಟುಂಬದವರ ಜೊತೆಗಿನ ಸಂಬಂಧದಲ್ಲೂ ಬಿರುಕು ಮೂಡುತ್ತದೆ. ಇದೆ ಸಮಯದಲ್ಲಿ ತನ್ನ ಗಂಡನ ಎರಡನೆಯ ಮದುವೆಯ ವಿಷಯ ತಿಳಿದು, ದುಃಖಿತಳಾಗಿ ಹಿಂದೆಂದೂ ತಿಳಿದಿರದ ಜಾಗವೊಂದಕ್ಕೆ ಹೋಗಲು ನಿರ್ಧರಿಸುತ್ತಾಳೆ. ಮತ್ತೊಮ್ಮೆ ಆ ನಿಗೂಢ ವ್ಯಕ್ತಿಯು ಅವಳಿಗೆ ಮಾರ್ಗದರ್ಶನ ನೀಡಲು ಪ್ರತ್ಯಕ್ಷನಾಗುತ್ತಾನೆ.

ಶಿಖಂಡಿನಿಯು ಗಂಡಸಾಗಿ ರೂಪಾಂತರಗೊಳ್ಳುವ ಈ ಕಥೆಯನ್ನು ಬೇರೆ ಎಲ್ಲಾ ಪುನರಾವರ್ತನೆಗಿಂತ ಈ ಪುಸ್ತಕವು ವಿಭಿನ್ನವಾಗಿ ಚಿತ್ರಿಸುತ್ತದೆ. ಇಂತಹ ರೂಪಾಂತರಕ್ಕೆ ವರವನ್ನು ಕೊಟ್ಟ ಯಕ್ಷ-ಯಕ್ಷಿಣಿಯರು ನಿಜವಾಗಲೂ ಮಾಂತ್ರಿಕರೆ? ಅಥವಾ, ಈ ಮಾಯಾಲೋಕದ ಹಿಂದೆ ವಿಜ್ಞಾನ ಭಂಡಾರವಿತ್ತೆ? ಪ್ರಾಚೀನರು ಕೇವಲ ಅಲೌಕಿಕ ಶಕ್ತಿಗಳನ್ನು ಹೊಂದಿದ್ದ ಮೇರು ಮನುಷ್ಯರೊ? ಅಥವಾ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ವಿಜ್ಞಾನಿಗಳ್ಹೋ? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಮಹಾಭಾರತದ ಕುಖ್ಯಾ ತ ಪ್ರಸಂಗವು 18 ದಿನಗಳ ರಕ್ತದೋಕುಳಿಯ ಪ್ರವಾಹದ ಬಾಗಿಲನ್ನು ತೆರೆದಿದೆ ಎಂದು ನಂಬಲಾಗಿದೆ. ಹಸ್ತಿನಾಪುರದ ಸಭಾಂಗಣದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭವನ್ನು ತಿಳಿದ ಶಿಖಂಡಿನಿಗೆ, ಮಹಾರಥಿ ಭೀಷ್ಮನ ಮೇಲಿದ್ದ ದ್ವೇಷವು ಪುನರುಜ್ಜೀವನಗೊಳ್ಳುತ್ತದೆ. ಪಾಂಡವರು ಈ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದಾಗ ಶಿಖಂಡಿನಿಯು ಯುದ್ಧಕ್ಕೆ ಸಿದ್ಧಳಾಗಿ, ಸಮಯ ಬಂದಾಗ ಅದರ ಭಾಗವಾಗಲು ಬಯಸುತ್ತಾಳೆ. ಆದರೆ ಯುದ್ಧದ ಪುನರುತ್ಥಾನದಲ್ಲಿ ಮಹಿಳೆಯ ಪಾತ್ರ ಎಷ್ಟರದ್ದು ಎಂಬ ಪ್ರಶ್ನೆ ಅವಳಲ್ಲಿ ಮೂಡುತ್ತದೆ. ಈ ಸಮಯದಲ್ಲಿ ಯಕ್ಷರ ನಾಯಕನು ಕಂಡು ಕೇಳರಿಯದ ಲಿಂಗಪರಿವರ್ತನೆಯ ಇಳ-ವಿಜ್ಞಾನದ ಸಲಹೆಯನ್ನು ನೀಡುತ್ತಾನೆ.
ವ್ಯಾ ಪಕವಾಗಿ ನಂಬಲಾದ ಪುರಾಣಕ್ಕೆ ವಿರುದ್ಧವಾಗಿ ಶಿಖಂಡಿನಿಯ ರೂಪಾಂತರವು ಒಂದು ದಿನದಲ್ಲಿ ಸಂಭವಿಸುವುದಿಲ್ಲ. ಶಿಖಂಡಿನಿಯು ಹಲವಾರು ವರ್ಷಗಳ ಕಾಲ ಯಕ್ಷ ಗ್ರಾಮದ ಹೊರಗಿನ ಏಕಾಂತ ಸ್ಥಳದಲ್ಲಿ ವಾಸಿಸಿ ಅಸಾಧ್ಯವನ್ನು ಸಾಧಿಸಲು ಹಲವಾರು ಕಾರ್ಯ ವಿಧಾನಗಳಿಗೆ ಒಳಗಾಗುತ್ತಾಳೆ.
ಶಿಖಂಡಿನಿಯ ಕೈಯಲ್ಲಿ ಮಹಾರಥಿ ಭೀಷ್ಮನ ಮರಣದ ಘಟನೆಯೊಂದನ್ನು ಮಾತ್ರ ಎಲ್ಲಾ ಲೇಖಕರು ಉಳಿಸಿಕೊಂಡಿದ್ದಾರೆ. ಆದರೆ, ಆ ದಿನ ಏನಾಯಿತು ಎಂದು ನಮಗೆ ನಿಜವಾಗಿಯೂ ತಿಳಿದಿದೆಯೇ? ನಿಜವಾಗಿಯೂ ಅರ್ಜುನನ ಬಾಣ ಭೀಷ್ಮನಿಗೆ ತಾಗಿದ್ದೆ? ಅಥವಾ ಮಹಾರಥಿಯ ಮಾನವನ್ನು ಕಾಪಾಡಲು ಕಥೆಯನ್ನು ತಿರುಚಲಾಯಿತೆ? ಮಹಿಳೆಯ ಕೈಯಲ್ಲಿ ಮಹಾರಥಿ ಸಾಯುವುದು ಅತ್ಯಂತ ಮುಜುಗರದ ವಿಷಯವಾಗಿತ್ತೆ?

ಪಾಂಡವರು ಗೆದ್ದ ಕುರುಕ್ಷೇತ್ರ ಯುದ್ಧವು ಶಿಖಂಡಿನಿಯ ಸಾವಿನ ಕಥೆಯೊಂದಿಗೆ ಮುಕ್ತಾಯವಾಗುತ್ತದೆ. ಅವಳ ಸಾವು, ಅವಳ ಜೀವನದಂತೆ ನೋವಿನಿಂದ ಕೂಡಿತ್ತು. ಈ ಪ್ರಾಚೀನ ಮಹಾಕಾವ್ಯದಲ್ಲಿ ಶಿಖಂಡಿನಿಯ ತ್ಯಾಗವು ಎಲ್ಲದಕ್ಕಿಂತ ಮಿಗಿಲಾದದ್ದು. ಧರ್ಮದ ಉಳಿವಿಗಾಗಿ ತನ್ನ ಸ್ತ್ರೀತ್ವವನ್ನು ತ್ಯಾಗ ಮಾಡಲು ಆರಿಸಿಕೊಂಡಳು. ಬಹುಶ ಈ ಕಾರಣದಿಂದಲೇ ಕಥೆಯಲ್ಲಿ ಅವಳಿಗೆ ಮುಖ್ಯ ಸ್ಥಾನಮಾನ ದೊರೆಯುವುದಿಲ್ಲ.
ಇಂದು ಶಿಖಂಡಿನಿಯನ್ನು ಕೇವಲ ಒಬ್ಬ ನಪುಂಸಕ, ಆತನನ್ನು ಮಹಾರಥಿಯನ್ನು ಕೊಲ್ಲಲು ಪಾಂಡವರು ದಾಳವಾಗಿ ಉಪಯೋಗಿಸಿಕೊಂಡರು ಎಂದಷ್ಟೇ ತಿಳಿಯಲಾಗಿದೆ. ಆದರೆ ನಿಖರವಾಗಿ ಏನಾಯಿತು ಎಂದು ತಿಳಿಯುವುದು ಅಸಾಧ್ಯವಾದರೂ ಮಹಾಕಾವ್ಯದ ಈ ವ್ಯಾಖ್ಯಾನವು, ಅವಳ ಜೀವನದ ಬಗ್ಗೆ ನಮಗೆ ಕೆಲವು ವಾಸ್ತವಿಕ ಒಳನೋಟಗಳನ್ನು ನೀಡುತ್ತದೆ.
ಶಿಖಂಡಿನಿ ಕೊನೆಯುಸಿರೆಳೆಯುವ ಮುನ್ನ ಅವಳು ಹಾಗೂ ಅವಳಿಗೆ ಮಾರ್ಗದರ್ಶನ ನೀಡಿದ ಆ ನಿಗೂಢ ವ್ಯಕ್ತಿಯ ನಡುವೆ ನಡೆಯುವ ಅತ್ಯಂತ ಸುಂದರ ಸಂಭಾಷಣೆಯು ಓದುಗರ ಮನಸ್ಸಿನಲ್ಲಿ ಏಳುವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.

That is all I have for today. Don’t forget to hit the like button before you leave.

Love,

Ashwini


You can connect with me on:

  1. Instagram: ashwinishenoym
  2. Facebook: AuthorAshwiniShenoy

You can buy my books here:

  1. Shikhandini – Warrior Princess of the Mahabharata (ebook and paperback)
  2. Those Girls – A Tale of Perspectives (ebook)

Related Posts

Leave a Reply

%d bloggers like this: